ನಗರಗಳಲ್ಲಿ ವಾಸಿಸುವ ಬಡವರಿಗೆ ಕೈಗೆಟಕುವ ದರದಲ್ಲಿ ಮನೆ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆ

Dr Ashwathnarayan C. N.
1 min readJul 10, 2020

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆ — ನಗರದ(PMAY-U) ಅಡಿಯಲ್ಲಿ ಕೈಗೆಟುಕುವ ದರದಲ್ಲಿ ಬಾಡಿಗೆ ಮನೆ ಸಂಕೀರ್ಣ ನಿರ್ಮಾಣದ ಉಪಯೋಜನೆಯನ್ನು ಅನುಮೋದಿಸುವ ಮೂಲಕ ಸಮಯೋಚಿತ ನಿರ್ಧಾರ ತೆಗೆದುಕೊಂಡಿದೆ. ಈ ಮೂಲಕ ವಲಸೆ ಕಾರ್ಮಿಕರು ಹಾಗೂ ನಗರದ ಬಡ ನಿವಾಸಿಗಳಿಗೆ ನೆರವಾಗಲಿದೆ.

ಈ ನಿರ್ಧಾರದ ಅನುಸಾರ, ಪ್ರಸ್ತುತ ಖಾಲಿಯಿರುವ ಸರ್ಕಾರಿ ಅನುದಾನಿತ ವಸತಿ ಸಂಕೀರ್ಣಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಜೀವನಯೋಗ್ಯ ವಸತಿ ಸಮುಚ್ಚಯಗಳನ್ನಾಗಿ ಮಾಡಲು ಅವಕಾಶ ಕಲ್ಪಿಸಲಾಗಿದೆ ರಿಪೇರಿಗೊಳಿಸಲು ಅಥವಾ ಬೇಕಾದ ರೀತಿಯಲ್ಲಿ ಮಾರ್ಪಾಡು ಮಾಡಿ ಅಲ್ಲಿ ನೀರಿನ ಸಂಪರ್ಕ, ಒಳಚರಂಡಿ, ನೈರ್ಮಲ್ಯದ ವ್ಯವಸ್ಥೆಯನ್ನು ಒದಗಿಸಿಕೊಡುವುದು ಅವರ ಜವಾಬ್ದಾರಿಯಾಗಿರುತ್ತದೆ.

ಅದರೊಂದಿಗೆ, ಖಾಲಿ ಇರುವ ಸರ್ಕಾರಿ ಹಾಗೂ ಖಾಸಗಿ ಸ್ವಾಮ್ಯದ ಸ್ಥಳಗಳಲ್ಲಿ ಕೈಗೆಟುಕುವ ಬೆಲೆಯ ಬಾಡಿಗೆ ವಸತಿ ಸಮುಚ್ಚಯಗಳ ನಿರ್ಮಾಣ ಹಾಗೂ ಅಭಿವೃದ್ಧಿಗೆ ಉತ್ತೇಜನ ನೀಡಲಾಗುವುದು. ಭೂಮಿ ಬಳಕೆಗಾಗಿ ಅನುಮತಿ, 50% ಹೆಚ್ಚಿನ ಎಫ್.ಎ.ಆರ್./ಎಫ್.ಎಸ್.ಐ., ಆದ್ಯತೆಯ ವಲಯ ರಿಯಾಯಿತಿ ದರದಲ್ಲಿ ಸಾಲ, ತೆರಿಗೆಯಲ್ಲಿ ವಿನಾಯಿತಿ ಮುಂತಾದ ಉತ್ತೇಜನಕಾರಿ ಅಂಶಗಳು ಇದರಲ್ಲಿ ಒಳಗೊಂಡಿವೆ.

ಕೇಂದ್ರ ಸರ್ಕಾರದ ಈ ಯೋಜನೆಯ ಮುಖ್ಯ ಉದ್ದೇಶ — ನಗರದ ಬಡ ನಿವಾಸಿಗಳಿಗೆ ಅದರಲ್ಲಿಯೂ ಮುಖ್ಯವಾಗಿ, ಹಳ್ಳಿ ಪ್ರದೇಶದಿಂದ ನಗರದ ಕಡೆ ಹೊಸದಾಗಿ ವಲಸೆ ಬಂದಿರುವವರು, ಕಟ್ಟಡ ಕಾರ್ಮಿಕರು, ಜವಳಿ ಉದ್ಯೋಗದ ಕಾರ್ಮಿಕರು, ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು, ಕಾರ್ಖಾನೆ ಕಾರ್ಮಿಕರು ಇನ್ನೂ ಮುಂತಾದವರಿಗೆ ಕೈಗೆಟಕುವ ದರದಲ್ಲಿ ಮನೆ ಸೌಲಭ್ಯ ಕಲ್ಪಿಸಿಕೊಡುವುದು. ದೀರ್ಘಾವಧಿಯಲ್ಲಿ ಇದು ಕೊಳಚೆಪ್ರದೇಶಗಳು ಹೆಚ್ಚಾಗುವುದನ್ನು ಕಡಿಮೆ ಮಾಡಲಿದೆ ಹಾಗೂ ಯಾವುದೇ ಆಧುನಿಕ ಸೌಲಭ್ಯಗಳು ಇಲ್ಲದೇ ಇರುವ ವಸತಿ ಪ್ರದೇಶಗಳಲ್ಲಿ ವಾಸಿಸುವ ಜನರ ಸಂಖ್ಯೆ ಈ ಮೂಲಕ ಇಳಿಯಲಿದೆ.

--

--

Dr Ashwathnarayan C. N.

ಜನಸೇವಕ. Deputy Chief Minister of Karnataka. Minister for Higher Education, Electronics, IT & BT, Science & Technology, Skill Development.