ಸರ್ಕಾರಕ್ಕೆ ಒಂದು ವರ್ಷ. ಅಭಿವೃದ್ಧಿಗೆ ಹೊಸ ಸ್ಪರ್ಶ

Dr Ashwathnarayan C. N.
3 min readJul 27, 2020

ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಒಂದು ವರ್ಷದ ಆಡಳಿತಾವಧಿಯನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಹಲವಾರು ಸಾಧನೆಗಳು, ಸವಾಲುಗಳು ಹಾಗೂ ಯೋಜನೆಗಳ ಬಗ್ಗೆ ಹಂಚಿಕೊಳ್ಳಲು ಬಯಸುತ್ತೇನೆ.

ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸಂದರ್ಭದಲ್ಲಿ ಹಿಂದಿನ ಸರ್ಕಾರದ ವೈಫಲ್ಯಗಳು ಹಾಗೂ ರಾಜ್ಯದಲ್ಲಿ ತಲೆದೋರಿದ ಅತಿವೃಷ್ಟಿ, ಅನಾವೃಷ್ಟಿಯನ್ನು ನಾವು ಎದುರಿಸಬೇಕಾಯಿತು. ರೈತನಾಯಕ ಶ್ರೀ ಬಿ. ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ಪ್ರವಾಹ ಪರಿಸ್ಥಿತಿಯನ್ನು ಸಂಘಟಿತವಾಗಿ ನಿಭಾಯಿಸಲು ಸಫಲವಾಗಿದೆ. ಬಹಳ ಸಂತೋಷ ಮತ್ತು ಹೆಮ್ಮೆಯಾಗುತ್ತದೆ.

ಒಂದು ವರ್ಷದ ಅವಧಿಯಲ್ಲಿ ನಡೆದ ಸಾಧನೆ ಸವಾಲುಗಳನ್ನು ಎದುರಿಸಿದ್ದೇವೆ. ಅತಿವೃಷ್ಠಿ ಅನಾವೃಷ್ಠಿಯನ್ನು ನಮ್ಮ ಸರ್ಕಾರ ಎದುರಿಸಿದೆ. ಯಡಿಯೂರಪ್ಪ ಒಬ್ಬ ರೈತ ನಾಯಕ. ವಿರೋಧ ಪಕ್ಷದಲ್ಲಿದ್ದಾಗ ಹಾಗೂ ಸರ್ಕಾರದ ಅಧಿಕಾರಕ್ಕೆ ಬಂದಾಗ ಬಿಎಸ್ ವೈ ಜನರ ಮಧ್ಯೆ ಇದ್ದಾರೆ.

6000 ಕೋಟಿ ರೂ. ಗಿಂತಲೂ ಹೆಚ್ಚಿನ ಹಣವನ್ನು ಪ್ರವಾಹ ನೆರವಿಗಾಗಿ ವಿನಿಯೋಗಿಸಿ, ಕಷ್ಟಕಾಲದಲ್ಲಿ ನಿರಾಶ್ರಿತರಿಗೆ ಮನೆಬಾಗಿಲಿಗೆ ಪರಿಹಾರಕಾರ್ಯ ವ್ಯವಸ್ಥೆಯನ್ನು ತಲುಪಿಸಿದ್ದೇವೆ. 2 ಲಕ್ಷ ಮನೆಗಳು ಹಾಗೂ ನಿರಾಶ್ರಿತರ ಪ್ರತೀ ಕುಟುಂಬಕ್ಕೆ ತಲಾ 10,000 ರೂ. ಪರಿಹಾರ ಮೊತ್ತ ನೀಡಲಾಗಿದೆ. 1.25 ಲಕ್ಷ ಮನೆಗಳ ದುರಸ್ತಿಗಾಗಿ ಸುಮಾರು 911 ಕೋಟಿ ರೂ. ನಷ್ಟು ಆರ್ಥಿಕ ಸಹಾಯ ಒದಗಿಸಲಾಗಿದೆ. ಕುಸಿದ ಮನೆಗೆ 5 ಲಕ್ಷ ರೂ ಪರಿಹಾರ ನೀಡಿರುವುದು ನಮ್ಮ ಸರ್ಕಾರ. ಬೆಳೆಗಳ ನಾಶ ಪರಿಹಾರಕ್ಕೆ 1185 ಕೋಟಿ ರೂ. ನೀಡಿದ್ದೇವೆ. ಒಟ್ಟಾರೆ, ಪ್ರವಾಹ ಪರಿಹಾರಕ್ಕಾಗಿ ಕೇಂದ್ರದ ನೆರವು ಕೂಡಾ ಸೇರಿ 6018 ಕೋಟಿ ರೂ. ವಿನಿಯೋಗಿಸಲಾಗಿದೆ. ಕಾನೂನು ಅಡೆತಡೆ ಬದಿಗೊತ್ತಿ, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ದೇವೆ.

ನಂತರ ನಡೆದ ಉಪಚುನಾವಣೆಯಲ್ಲಿ ಜನತೆ ನಮ್ಮ ಕೈಹಿಡಿದು ಅಭಿವೃದ್ಧಿ ಕಾರ್ಯಗಳಿಗೆ ಬೆಂಬಲಿಸಿದರು. ಸಮ್ಮಿಶ್ರದ ಸರ್ಕಾರದ ಪಕ್ಷಗಳ ಅಧಿಕಾರದಾಹಿ ಧೋರಣೆ ಹಾಗೂ ಸ್ವಾರ್ಥ ರಾಜಕಾರಣವನ್ನು ಜನರು ತಿರಸ್ಕರಿಸಿದ್ದರು. ಜನರ ಆಶೀರ್ವಾದದೊಂದಿಗೆ ನಮ್ಮ ಸ್ಥಿರವಾದ ಸರ್ಕಾರ ಸ್ಥಾಪನೆಯಾಗಿದೆ. ಈ ಮೂಲಕ ರಾಜ್ಯಕ್ಕೆ ಉತ್ತಮ ಆಡಳಿತ ನೀಡಲು ಸಾಧ್ಯವಾಗಿದೆ.

ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಕಾನೂನು ಹಾಗೂ ಆಡಳಿತ ಅಡೆತಡೆಗಳನ್ನು ತೆರವುಗೊಳಿಸಿ ಹಲವು ಆಡಳಿತ ಸುಧಾರಣೆಗಳನ್ನು ತರಲು ಯಶಸ್ವಿಯಾಗಿದ್ದೇವೆ. ರಾಜ್ಯದಲ್ಲಿ ‘Ease Of Doing Business’ ಸುಧಾರಿಸಿದೆ. ರಾಜ್ಯದಲ್ಲಿ ಆವಿಷ್ಕಾರ ಕ್ಷೇತ್ರಕ್ಕೆ ಹೆಚ್ಚಿನ ಇಂಬು ನೀಡಲು Innovation Authority of Karnataka ದ ಸ್ಥಾಪನೆಯಾಗಿದೆ. ವ್ಯವಸಾಯ ಜಮೀನುಗಳನ್ನು ಖರೀದಿಸಲು ಅನುಕೂಲವಾಗುವಂತೆ ನಾವು ಕೃಷಿ ಕ್ಷೇತ್ರದಲ್ಲಿ ಸುಧಾರಣೆ ತಂದಿದ್ದೇವೆ. IT-BT ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ವಿಶ್ವ ಸ್ತರದಲ್ಲಿ ಸ್ಪರ್ಧಿಸುವ ಮಟ್ಟಕ್ಕೆ ಬೆಳೆಯಬೇಕಾಗಿದೆ. ಪ್ರಸ್ತುತ 25% GSDP ಪಾಲು IT ಕ್ಷೇತ್ರದಿಂದ ಬರುತ್ತಿದ್ದು, ಇತರ 75% ಪಾಲಿನಲ್ಲೂ ಅಭಿವೃದ್ಧಿ ಕಾಣಲು ತಂತ್ರಜ್ಞಾನದ ಅಭಿವೃದ್ಧಿ ಅವಶ್ಯಕ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಪ್ರತಿಭೆ, ಉದ್ಯಮಶೀಲತೆ, ಕೌಶಲ್ಯಗಳನ್ನು ಪ್ರೇರೇಪಿಸಲು ಹಾಗೂ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಕಾಣಲು ಹೊಸತನ ಮತ್ತು ಆವಿಷ್ಕಾರಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂಬುದು ನಮಗೆ ಹೆಮ್ಮೆಯ ವಿಚಾರ. ‘Invest India’ ದಾರಿಯಲ್ಲೇ ‘Invest Karnataka’ ದ ದೃಷ್ಟಿಕೋನ ಮೂಲಕ ನೂತನ ‘Industrial Policy’ ಯನ್ನು ತರುತ್ತಿದ್ದೇವೆ. ವ್ಯವಸ್ಥೆಯ ಸಡಿಲೀಕರಣ, ವಿಕೇಂದ್ರೀಕರಣಕ್ಕೆ ಆದ್ಯತೆ ನೀಡಿ ಎಲ್ಲಾ ವಿಭಾಗಳಲ್ಲಿ ಅಭಿವೃದ್ಧಿಯ ಹೊಸ ಶಕೆ ನಿರ್ಮಾಣಕ್ಕೆ ಬಿಜೆಪಿ ಸರ್ಕಾರ ಹೆಜ್ಜೆ ಇಡುತ್ತಿದೆ.

ನಾಡಪ್ರಭು ಕೆಂಪೇಗೌಡರಿಂದ ನಿರ್ಮಿತವಾದ ನಮ್ಮ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗಾಗಿ ಕಾರಿಡಾರ್ ನಿರ್ಮಾಣ ಸೇರಿದಂತೆ, ಕಾಡು-ಕೆರೆಗಳ ಅಭಿವೃದ್ಧಿ ಇವೇ ಮುಂತಾದ ಹಲವಾರು ಯೋಜನೆಗಳು ಜಾರಿಗೆ ಬರುತ್ತಿವೆ. ಬೆಂಗಳೂರಿನಲ್ಲಿ ಜೀವನಶೈಲಿಯ ವೃದ್ಧಿ ಹಾಗೂ Sustainable Development ಕಾಣುವುದು ನಮ್ಮ ಆದ್ಯತೆಯಾಗಿದೆ.

ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಸುಧಾರಣೆಗಳನ್ನು ತಂದು ವ್ಯಕ್ತಿತ್ವ ವಿಕಸನ, ಕೌಶಲ್ಯ ಅಭಿವೃದ್ಧಿ, ಉತ್ಕೃಷ್ಟ ಗುಣಮಟ್ಟದ ಉನ್ನತ ಶಿಕ್ಷಣದ ಹಲವಾರು ಸಂಸ್ಥೆಗಳನ್ನು ಅನುಮೋದಿಸುವ ಮೂಲಕ ಸಮಗ್ರವಾಗಿ ಅಭಿವೃದ್ಧಿ ಕಾಣುತ್ತಿದೆ. ತಾಂತ್ರಿಕ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು, Tier-2, Tier-3 ನಗರಗಳ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು Talent Accelerator Programme ಅನ್ನು ಆರಂಭಿಸಲಾಗುತ್ತಿದೆ. ರಾಯಚೂರು IIIT , ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ನ ಕ್ಯಾಂಪಸ್ ನಿರ್ಮಾಣ, 100 ವರ್ಷಗಳ ಇತಿಹಾಸವುಳ್ಳ UVCE ಯನ್ನು IIT ಮಾದರಿಯಲ್ಲಿ ಅಭಿವೃದ್ಧಿಗೊಳಿಸುವುದು ಹೀಗೆ ಅನೇಕ ಕಾರ್ಯಯೋಜನೆಗಳು ಜಾರಿಯಾಗುತ್ತಿವೆ.

ಪ್ರಸ್ತುತ ವಿಶ್ವವೇ ಕೊರೋನಾದಿಂದ ತತ್ತರಿಸುತ್ತಿರುವಾಗ ದೇಶದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಮರ್ಥವಾಗಿ ಕೋವಿಡ್ ಪರಿಸ್ಥಿತಿ ನಿಭಾಯಿಸುತ್ತಿದ್ದೇವೆ. ಸುಮಾರು 100 ಲ್ಯಾಬ್ ಗಳಲ್ಲಿ ಪರೀಕ್ಷೆಗೆ ವ್ಯವಸ್ಥೆಯಿದ್ದು, ದೇಶದಲ್ಲೇ PPE ಕಿಟ್, ಔಷಧಿ ಉತ್ಪಾದನೆಯಾಗುತ್ತಿದೆ.

ಎಲ್ಲಾ ಕ್ಷೇತ್ರಗಳಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ನಮ್ಮ ಸಚಿವ ಸಂಪುಟ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಲು ನನಗೆ ಅಭಿಮಾನವಿದೆ. ನಮ್ಮ ಸರ್ಕಾರ ಒಂದು ವರ್ಷ ಪೂರೈಸುತ್ತಿರುವ ಈ ಸಂದರ್ಭದಲ್ಲಿ, ಜುಲೈ 27 ರಂದು ನಮ್ಮ ಸರ್ಕಾರದ ಸಾಧನೆಗಳ ವಿವರದ ಹೊತ್ತಿಗೆಯನ್ನು ಬಿಡುಗಡೆಗೊಳಿಸಲಿದ್ದಾರೆ.

ಜನತೆಯ ಪ್ರೀತಿ, ವಿಶ್ವಾಸ, ಬೆಂಬಲ ಹಾಗೂ ಜನಾಶೀರ್ವಾದಕ್ಕೆ ನಾವು ಚಿರಋಣಿ. ರಾಜ್ಯದ ಶ್ರೇಯೋಭಿವೃದ್ಧಿಗಾಗಿ ನಮ್ಮ ಸರ್ಕಾರ ಸದಾ ಬದ್ಧವಾಗಿದೆ. ನಿಮ್ಮ ಬೆಂಬಲ, ವಿಶ್ವಾಸ ಇದೇ ರೀತಿ ನಿರಂತರವಾಗಿರಲಿ. ನನ್ನ ಕೃತಜ್ಞತೆಗಳು.

--

--

Dr Ashwathnarayan C. N.

ಜನಸೇವಕ. Deputy Chief Minister of Karnataka. Minister for Higher Education, Electronics, IT & BT, Science & Technology, Skill Development.